ಮುನ್ನುಡಿ - ಮತ್ತೆ ಬಂತು ಮರುದಿನ - ಎಸ್ಟೋ ಹೊತ್ತಿಗೆಗಳನ್ನು ಓದಿದ ನಂತರ ತಾನೂ ಇಂಥದ್ದೊಂದನ್ನು ಬರೆಯಬೇಕೆಂಬ ಆಸೆ ಚಿಗುರಿತ್ತು. ಅದು ಬೆಳೆದು ಮರವಾದಾಗ, ಬರೆಯೋದಿರಲಿ ಓದಲಿಕ್ಕೆ ಕೂಡ ಸರಿಯಾಗಿ ಟೈಮ್ ಸಿಗುತ್ತಿರಲಿಲ್ಲ. ಆದರೂ ಒಂದು ಹೆಜ್ಜೆ ಹಿಂದೆಯಿಟ್ಟು, ಸ್ವಲ್ಪ ಸಮಯ ಮಾಡಿಕೊಂಡು ಬರೆಯುವ ಪ್ರಯತ್ನ ಮಾಡಿದೆ. ಅದರ ಮೊದಲ ಮೆಟ್ಟಿಲು ಇದು. ಇದರಲ್ಲಿ ನಾನು ಓದಿದ ಹಲವಾರು ಲೇಖಕರ ಶೈಲಿಯನ್ನು ನೀವು ಗಮನಿಸಬಹುದು. ಕಥೆಯ ಹಂದರ - ಓರ್ವನ ನಾಳೆಯನ್ನು ಕಾಣುವ ಹಂಬಲ. ಮತ್ತು ಇಂದಿನ ಯುದ್ಧ. ನುರಿತ ಲೇಖಕ ಅಲ್ಲವಾದುದರಿಂದ, ಅಲ್ಲಲ್ಲಿ ಲೇಖನ ಕಳಪೆಯಾಗುವ ಸಾಧ್ಯತೆ ಇದೆ. ಆದರೆ ಎಲ್ಲೂ ಕೃತಿ ಚೌರ್ಯ ಮಾಡುವುದಿಲ್ಲ. ಏಕೆಂದರೆ ಈ ಕಥೆಗಾಗಿ ನನ್ನ ಅಮೂಲ್ಯ ಸಮಯವನ್ನು ಮೀಸಲಿಟ್ಟಿರುವೆ. ಇದೊಂದು ಕಾಲ್ಪನಿಕ ಕಥೆ. ಎಲ್ಲಾದರೂ, ಯಾರಿಗಾದರೂ, ಹೇಗಾದರೂ ಲಿಂಕ್ ಆಗಿದ್ದರೆ - ಅದು ೧೦೦% ಕಾಕತಾಳಿಯ...
--- ೧. ಗೋರ್ಕಲ್ಲಿಗೆ ಪಯಣ
ಟೋನಿ ನೀರು ಕುಡಿದು ಬಾಯಿ ಒರೆಸಿಕೊಂಡ.
'ಅಬ್ಬ' ಹೋದ ಜೀವ ವಾಪಾಸ್ ಬಂದ ಹಾಗಾಯಿತು.
ತುಂಬಾ ಥ್ಯಾಂಕ್ಸ್ ಎಂದು ಹೇಳಿ ಟೈಮ್ ನೋಡಿಕೊಂಡ ಟೋನಿ.
ರಾತ್ರಿ 9:30.
ಅಂದರೆ, ಇನ್ನೂ ಎರಡು ತಾಸು ಪ್ರಯಾಣ ಮುಂದುವರೆಸಲೇಬೇಕು.
ಮೊಬೈಲ್ ನಲ್ಲಿ ಬ್ಯಾಟರಿ ಕ್ಷೀಣಿಸಿತ್ತು. ಸ್ವಿಚ್ ಆಫ್ ಮಾಡಿದರೆ ಎಲ್ಲಿ ಮತ್ತೆ ಆನ್ ಆಗುವುದಿಲ್ಲವೋ ಎಂಬ ಭಯ.
ಯಾರಾದರೂ ಕಾಲ್ ಮಾಡಿದರೆ, ರಿಂಗ್ ಆಗಿ ಉಳಿದ ಬ್ಯಾಟರೀನು ಕಾಲಿ ಆಗುತ್ತೆ ಎಂದು ಸೈಲೆಂಟ್ ಮೋಡಿಗೆ ಹಾಕಿದ ಟೋನಿ.
ಛೆ!, ಬಸ್ಸು ಹೊರಟಾಗ ಅಸ್ಟೆಲ್ಲಾ ಗೇಮ್ ಆಡಬಾರದಿತ್ತು ಎಂದುಕೊಂಡ ಟೋನಿ.
---
12:00 ಗಂಟೆ. ಮಧ್ಯ ರಾತ್ರಿಗೆ 'ಗೋರ್ಕಲ್ಲು' ಇಳಿಯೋರು ಬನ್ನಿ, ಎಂದು ನೀರು ಕೊಟ್ಟ ಪುಣ್ಯಾತ್ಮ ಕಂಡಕ್ಟರ್ ಕರೆದಾಗ, ನಿದ್ರೆಯಿಂದ ಎದ್ದ ಟೋನಿ, ಲಗೇಜ್ ಸಮೇತ, ಬಸ್ಸಿನ ಬಾರವನ್ನು ಇಳಿಸಿದ.
ಸುತ್ತಲೂ ಕತ್ತಲು ಆವರಿಸಿದ್ದರೂ, ಹುಣ್ಣಿಮೆಯ ಚಂದ್ರ ಮೋಡಗಳ ನಡುವೆ ಆಗಾಗ್ಗ ಇಣುಕುತ್ತಿದ್ದ.
ಟಾರ್ಚ್ ಆನ್ ಮಾಡಿ ಮಣ್ಣು ರಸ್ತೆಯಲ್ಲಿ ಒಬ್ಬನೇ ನಡೆಯತೊಡಗಿದ ಟೋನಿ.
ಮೊದಲ ಸಲವೋ ಎಂಬಂತೆ, ತನ್ನ ಚಪ್ಪಲಿಯ ಶಬ್ದವೇ ಕರ್ಕಶವಾಗಿ ಕೇಳುತ್ತಿದೆ!
ಇನ್ನೆರಡು ಮಾರು ದೂರ ಕ್ರಯಿಸಿದರೆ, ಗೆಸ್ಟ್ ಹೌಸ್ ಸಿಗುತ್ತದೆ!
ಕೊರೆಯುವ ಚಳಿ! ಪ್ರಕೃತಿಯ ಸುಳಿ! ಅದರಲ್ಲಿ ಒಂದು ಕೈಯಲ್ಲಿ ಟಾರ್ಚ್, ಇನ್ನೊಂದರಲ್ಲಿ ಜೀವ ಹಿಡಿದುಕೊಂಡು ಮುಂದೆ ಸಾಗಿದ ಟೋನಿ.
---
ಗೆಸ್ಟ್ ಹೌಸ್ ಮುಂದೆ, ತನ್ನ ಬರುವಿಗೆ ಕಾಯುತ್ತಿದ್ದ ಗುಮಾಸ್ತ ರಾಮಣ್ಣ ಲಾಟೀನು ದೊಡ್ಡ ಮಾಡುವುದು ಕಾಣಿಸಿತು.
'ಸ್ವಾಮಿ. ರಾತ್ರಿ ಇಲ್ಲಿ ಕರೆಂಟ್ ಇರೋದಿಲ್ಲ, ನಿಮ್ಮ ರೂಮಲ್ಲೂ ಲಾಟೀನ್ ಹಚ್ಚೋವ್ನಿ, ನೀವು ಬಟ್ಟೆ ಬದಲಾಯಿಸಿ. ಅಸ್ಟರಲ್ಲಿ ನಾನು ಬಿಸಿ ಚಹಾ ಮಾಡ್ಕೊಂಡು ಬರ್ತೀನಿ..
ಚಹಾ ಜೊತೆಗೆ ಏನಾದ್ರು ಸಿಗುತ್ತಾ ರಾಮಣ್ಣ?
ಹು ಸ್ವಾಮಿ, ನೀವು ಸರಿ ಅಂದ್ರೆ, ಇನ್ನರ್ದ ಗಂಟೇಲಿ ಅಡುಗೆ ತರ್ಸ್ತೇನಿ.
ನೀನು ಊಟ ಮಾಡಿದ್ಯ ರಾಮಣ್ಣ?
ಇವತ್ತು ಹುಣ್ಣಿಮೆ ನೋಡಿ ಸ್ವಾಮಿ , ಉಪ್ವಾಸ ಮಾಡನ ಅಂತ.
ಅಲ್ಲಾ ರಾಮಣ್ಣ! ಎಲ್ಲರೂ ಏಕಾದಶಿಗೆ ಉಪವಾಸ ಮಾಡಿದರೆ ನೀನು? ಇರ್ಲಿ ಬಿಡು, ಚಹಾ ಸ್ವಲ್ಪ ಜಾಸ್ತಿ ಮಾಡು ಬಿಸ್ಕೆಟ್ ಇದೆ ಸಾಕು.
ಸರಿ ಸ್ವಾಮೀ.
---
ಗೋರ್ಕಲ್ಲಿಗೆ, ಟೋನಿ ಹೋಗ್ತಾ ಇರೋದು, ಇದೂ ಸೇರಿ ಮೂರನೆ ಸರ್ತಿ. ಎರಡನೇ ಸಲ ಬಂದಾಗ ರಾಮಣ್ಣ ಉಪ್ಪಿಟ್ಟು ಮಾಡಿದ್ದು ನೆನಪಾಯ್ತು.
ಟೀ ಕುಡಿದು ಬಿಸ್ಕೆಟ್ ತಿಂದ ಮೇಲೆ ಒಂದು ತರ ಹಿತವೆನಿಸಿತು.
ರಾಮಣ್ಣ, ನೀನು ಮಲ್ಕೋ ಹೋಗು. ನಾನು ಸ್ವಲ್ಪ ಪುಸ್ತಕ ಓದಬೇಕು.
ಆಗ್ಲಿ ಸ್ವಾಮಿ, ಮಲಗಬೇಕಾದರೆ ಲಾಟೀನು ಸಣ್ಣ ಮಾಡ್ಬುಡಿ. ನೀರು ಇಟ್ಟೀನಿ, ಏನಾದ್ರೂ ಬೇಕಾದ್ರೆ ಎಬ್ಬುಸ್ರಿ.
ಸರಿ ರಾಮಣ್ಣ. ಗುಡ್ ನೈಟ್.
ರಾಮಣ್ಣನಿಗೆ ಗುಡ್ ನೈಟ್ ಮೀನಿಂಗ್ ಗೊತ್ತಿದೆಯೋ ಇಲ್ವೋ? ಎಂಬ ವಿಚಿತ್ರ ಸಂಶಯ ಟೋನಿಯ ತಲೆಯಲಿ ಸುಳಿಯಿತು. ಏನು ತಿಳಿದುಕೊಂಡನೋ, ಅಥವಾ ಗೊತ್ತಿರಲೂಬಹುದು.
ಬುಕ್ ತೆಗೆದು ಲಾಟೀನು ದೀಪದಲ್ಲಿ ಓದುವಾಗ, ಪ್ರಯಾಣದ ಆಯಾಸ ಕಣ್ಣಲ್ಲಿ ಕಾಣಿಸತೊಡಗಿತು.
ಹದಿನೈದು ಪೇಜ್ ತಿರಿಗಿಸೋದರಲ್ಲಿ ನಿದ್ದೆ ಆವರಿಸಿ, ಹಾಗೆ ಕಣ್ಣು ಮುಚ್ಚಿ, ಇನ್ನೇನು ಲಾಟೀನಿಗೆ ತಲೆ ತಾಗುತ್ತೆ ಅನ್ನುವಾಗ ದಡಕ್ಕನೆ ಎದ್ದ ಟೋನಿ.
ಬಿಚ್ಚಿಟ್ಟ ವಾಚ್, ಟೋನಿ ನೋಡದಿದ್ದರೂ ೨ ಗಂಟೆ ತೋರಿಸುತ್ತಿತ್ತು. ಮಲಗಿದ ಟೋನಿ.
---
ಕಿಟಕಿಯಿಂದ ತಣ್ಣನೆ ಗಾಳಿಯ ಜೊತೆಗೆ ಬೆಳಕೂ ಸಹ ಬಂದು ಟೋನಿ ಕಣ್ಣು ತೆರೆದಾಗ ೯ ಗಂಟೆ. ಮೊದಲು ಮಾಡಿದ ಕೆಲಸ ಎಂದರೆ ಮೊಬೈಲನ್ನು ಚಾರ್ಜಿಗೆ ಹಾಕೋದು. ಸ್ನಾನ ಮಾಡಿ ರಾಮಣ್ಣ ತಂದುಕೊಟ್ಟ ಇಡ್ಲಿಯನ್ನು ತಿಂದ ಮೇಲೆ ಬಂದ ಕಾರ್ಯಕ್ಕೆ ರೆಡಿ ಆದ ಟೋನಿ.
ರಾಮಣ್ಣ, ಈಗ ಹತ್ತು ಗಂಟೆ, ನಾನು ಸರಿಯಾಗಿ ಎರಡು ಗಂಟೆಗೆ ಇಲ್ಲಿಗೆ ಬರ್ತೀನಿ, ಸಾರಿಗೆ ಸ್ವಲ್ಪ ಕಡಿಮೆ ಉಪ್ಪು ಹಾಕು.
ಸರಿ ಸ್ವಾಮಿ. ತಡ ಆದ್ರೆ, ನಾನೇ ಊಟ ತರ್ತೀನಿ.
ಅದೇನು ಬೇಡ ರಾಮಣ್ಣ. ನಾನು ಬರ್ತೀನಿ, ಆದ್ರೆ ಒಂದು ಅರ್ದ ಗಂಟೆ ಆಚೀಚೆ ಆಗಬಹುದು ಅಸ್ಟೆ.
ಸರಿ ಸ್ವಾಮಿ, ನಿಮ್ಮಿಸ್ಟದಾಗೆ ಆಗ್ಲಿ.
ಟೋನಿ ಕಾಡಿನ ಮರಗಳ ನಡುವೆ ಮರೆಯಾಗುವ ಮುನ್ನ ರಾಮಣ್ಣ ಕೊಟ್ಟ ಕತ್ತಿಯನ್ನು ಮರೆತುಹೋದ.
---
ಗೋರ್ಕಲ್ಲಿಗೆ ಹೆಸರು ಬಂದಿದ್ದು ಬಹುಶ ಆ ಅರಣ್ಯದ ನಡುವೆ ಇರುವ ಒಂಟಿ ಕಲ್ಲಿನ ಬೆಟ್ಟದಿಂದ, ಎಂದು ರಾಮಣ್ಣ ಮೊದಲ ಸಾರಿ ಬಂದಾಗ ಹೇಳಿದ್ದ. ಟೋನಿ ಉಳಿದಿರುವ ಗವರ್ನಮೆಂಟ್ ಗೆಸ್ಟ್ ಹೌಸ್ ಸಮೀಪ ೧೦-೧೫ ಮನೆಗಳಿವೆ.
ಲಾಸ್ಟ್ ಟೈಮ್ ಬಂದಾಗ ರಾಮಣ್ಣನ ಮಗ ರಾಜು ತನ್ನ ಜೊತೆ ಗೋರ್ಕಲ್ಲ ಸಮೀಪ ಬಂದಿದ್ದು ನೆನಪಾಯಿತು.
ಅರೆ! ರಾಮಣ್ಣ ನ ಬಳಿ ಕೇಳೋದು ಮರೆತುಬಿಟ್ಟೆ! ಬ್ಯಾಗ್ನಲ್ಲಿರೋ ಚಾಕೋಲೇಟ್ ಕೊಡಬೇಕಿತ್ತು.
ಗೆಸ್ಟ್ ಹೌಸಿನಿಂದ ನೈಋತ್ಯ ದಿಕ್ಕಿನಲ್ಲಿ ಐದು ಕಿಲೋಮೀಟರ್ ನಡೆದರೆ ಸಿಗುವುದೇ ಗೋರ್ಕಲ್ಲ ಬೆಟ್ಟ.
ಗೋರ್ಕಲ್ಲ ಬೆಟ್ಟದ ಸಮೀಪ ಚಿತ್ರ ವಿಚಿತ್ರವಾದ ಔಷದೀಯ ಗುಣಗಳುಳ್ಳ ಸಸ್ಯಗಳು ಕಾಲ ಕಾಲಕ್ಕೆ ಹುಟ್ಟುತಿದ್ದವು. ಆದನ್ನು ಅರಿತ ಸರ್ಕಾರ ಅಲ್ಲಿ ಅಧ್ಯಯನಕ್ಕೆಂದು ಒಂದು ಗೆಸ್ಟ್ ಹೌಸ್ ಕಟ್ಟಿತು. ಅದೇ ಕಾರ್ಯ ನಿಮಿತ್ತ ಆ ಊರಿಗೆ ಮೂರನೇ ಬಾರಿ ಬಂದಿದ್ದ ಟೋನಿ.
ಆ ಬೆಟ್ಟದ ಬದಿಯಲ್ಲಿ ಮಳೆಗಾಲ ನಿಂತಾಗ ಬಿಡೋ ಹೂಗಳಿಗಾಗಿ, ಈ ಭಯಂಕರ ಕಾಡಿನಲ್ಲಿ ಒಂಟಿಯಾಗಿ ನಡೆಯೋದು ಒಂದು ತರ ಹೆಮ್ಮೆಯನಿಸಿತು ಟೋನಿಗೆ.
ಹುಲಿಗಳು, ಕಾಡು ಪ್ರಾಣಿಗಳು, ಸಾಮಾನ್ಯವಾಗಿ ಈ ಬೆಟ್ಟದ ಬಳಿ, ಸುಮಾರು ೪ ಕಿಲೋಮೀಟರ್ ರೇಡಿಯಸ್ ಒಳಗೆ ಬರುತ್ತಿರಲಿಲ್ಲ ಎಂದು ಟೋನಿಗೆ ಖಚಿತ ಮಾಹಿತಿ ಇತ್ತು. ಅದಕ್ಕೆ ಕಾರಣ ಅಲ್ಲಿ ಬೆಳೆಯುವ ಇನ್ನೊಂದು ಬಗೆಯ ಗಿಡಗಳು. ಮೂಗನ್ನು ಕೊರೆಯುವ ವಾಸನೆಯನ್ನು ಬೀರುವ ಈ ಗಿಡಗಳ ಮದ್ಯ ಟೋನಿ ಮಾಸ್ಕ ಹಾಕಿಕೊಂಡು ಹೆಜ್ಜೆ ಹಾಕುತ್ತಿದ್ದ.
---
ಟೋನಿ ಯಾರು? ರಾಜು ಯಾಕೆ ಈ ಬಾರಿ ಬರಲಿಲ್ಲ? ಟೋನಿ ಕತ್ತಿಯನ್ನು ಮರೆತುಹೋಗಿದ್ದು ರಾಮಣ್ಣನಿಗೆ ಗೊತ್ತಾಯಿತೆ? ಮುಂದಿನ ಸಂಚಿಕೆಯಲ್ಲಿ - "೨. ಹಿಂಗಾರಿನ ಬಂಗಾರದ ಹೂಗಳು"

No comments:
Post a Comment